ಜೆಡಿಎಸ್ ಹಳೆಯ ಪಕ್ಷ, ಮುಂದಿನ ಬಾರಿ ನಮ್ದೇ ಸರ್ಕಾರ, ಹೆಚ್‌ಡಿಕೆನೇ ಸಿಎಂ.. ಇಬ್ರಾಹಿಂ - ಕರ್ನಾಟಕದ ಜನ ನನ್ನನ್ನು ಮನೆಮಗನಂತೆ ನೋಡುತ್ತಾರೆ ಎಂದ ಸಿ.ಎಂ.ಇಬ್ರಾಹಿಂ
ಬೆಂಗಳೂರು : ಜೆಡಿಎಸ್ ರಾಜ್ಯದ ಹಳೆಯ ಪಕ್ಷ. ಪ್ರತಿ ಗ್ರಾಮದಲ್ಲೂ 5-10 ಮಂದಿ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ನಾವು ಮತ್ತಷ್ಟು ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡಬೇಕಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಲಿದ್ದಾರೆ. ಇನ್ನು ಕರ್ನಾಟಕದ ಜನ ನನ್ನನ್ನು ಮನೆಮಗನಂತೆ ನೋಡುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಬೆಂಗಳೂರಿನಲ್ಲಿ ಹೇಳಿದರು..