ಕರ್ನಾಟಕ

karnataka

ETV Bharat / videos

ಜೆಸಿಬಿಯ ಟೈರ್​ಗೆ ಗಾಳಿ ತುಂಬುವಾಗ ಬ್ಲಾಸ್ಟ್​: ಇಬ್ಬರು ಸಾವು - ರಾಜಪಾಲ್ ಸಿಂಗ್ ಮತ್ತು ಪ್ರಾಂಜಲ್ ನಾಮ್‌ದೇವ್ ಮೃತ ಕಾರ್ಮಿಕರು

By

Published : May 5, 2022, 5:59 PM IST

ರಾಯ್‌ಪುರ: ಜೆಸಿಬಿಯ ಟೈರ್​ಗೆ ಗಾಳಿ ತುಂಬುವಾಗ ಅದು ಬ್ಲಾಸ್ಟ್​ ಆದ ಘಟನೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಸಿಲ್ತಾರಾ ಪ್ರದೇಶದಲ್ಲಿ ನಡೆದಿದೆ. ಇದರಿಂದ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮಂಗಳವಾರ ಮಧ್ಯಾಹ್ನ 3:30ರ ಸುಮಾರಿಗೆ ಈ ಘಟನೆ ನಡೆದಿದೆ. ಇಲ್ಲಿನ ಘರ್ಕುಲ್ ಸ್ಟೀಲ್ ಪ್ರೈವೇಟ್ ಲಿಮಿಟೆಡ್ ಗ್ಯಾರೇಜ್​ನಲ್ಲಿ ಈ ಅವಘಡ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಗ್ಯಾರೇಜ್​ನ ನೌಕರರು ಸುಮಾರು 8 ಅಡಿ ಎತ್ತರಕ್ಕೆ ಜಿಗಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ರಾಜಪಾಲ್ ಸಿಂಗ್ ಮತ್ತು ಪ್ರಾಂಜಲ್ ನಾಮ್‌ದೇವ್ ಅವರು ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ನಿವಾಸಿಗಳು. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ABOUT THE AUTHOR

...view details