ಪುಲಿವೆಂದುಲದ ಪುಲಿ ಜಗನ್ ರೆಡ್ಡಿ ಆಂಧ್ರಕ್ಕೆ ಹೊಸ ಅಧಿಪತಿ! - ಆಂಧ್ರ ಪ್ರದೇಶ
ಹೈದರಾಬಾದ್:ಪುಲಿವೆಂದುಲದ ಪುಲಿ ವೈ.ಎಸ್ ಜಗನ್‌ಮೋಹನ್ ರೆಡ್ಡಿ ರಾಜಕೀಯದಲ್ಲಿ ಬಹುದೊಡ್ಡ ಸ್ಥಾನ ದಕ್ಕಿಸಿಕೊಳ್ತಿದ್ದಾರೆ. ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಆಂಧ್ರದಲ್ಲಿ ಟಿಡಿಪಿ ಸರ್ಕಾರವನ್ನ ಧೂಳಿಪಟ ಮಾಡಿದೆ. ಲೋಕಸಭಾ ಮತ್ತು ಆಂಧ್ರ ವಿಧಾನಸಭೆಗೆ ಏಕ ಕಾಲದಲ್ಲಿ ನಡೆದ ಚುನಾವಣೆಯಲ್ಲಿ ಜಗನ್, ಎನ್.ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷ ಮಕಾಡೆ ಮಲಗಿಸಿದ್ದಾರೆ.