22,850 ಅಡಿ ಎತ್ತರದಲ್ಲಿ ಹಿಮದ ನಡುವೆ ಯೋಗಾಭ್ಯಾಸ : ಐಟಿಬಿಪಿ ದಾಖಲೆ ನಿರ್ಮಾಣ - ಯೋಗಾಭ್ಯಾಸ
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪರ್ವತಾರೋಹಿಗಳು ಉತ್ತರಾಖಂಡ ಹಿಮಾಲಯದಲ್ಲಿ 22,850 ಅಡಿ ಎತ್ತರದಲ್ಲಿ ಹಿಮದ ನಡುವೆ ಯೋಗಾಭ್ಯಾಸ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆ ಪ್ರಧಾನಮಂತ್ರಿಯವರ ಈ ವರ್ಷದ ಥೀಮ್- 'ಮಾನವೀಯತೆಗಾಗಿ ಯೋಗ'ದಿಂದ ಪ್ರೇರಿತರಾಗಿ ಯೋಗಾಭ್ಯಾಸ ಮಾಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಕಳೆದ ವಾರ ಮೌಂಟ್ ಅಬಿ ಗಮಿನ್ ಶಿಖರದಲ್ಲಿ ಹಿಮದಿಂದ ಆವೃತವಾದ ಪ್ರದೇಶದಲ್ಲಿ ಇದೇ ತಂಡ ಯೋಗ ಮಾಡಿತ್ತು. 14 ಸದಸ್ಯರ ತಂಡ ಹಿಮದಲ್ಲಿ 20 ನಿಮಿಷಗಳ ಕಾಲ ಯೋಗಾಭ್ಯಾಸ ಮಾಡಿದೆ.
Last Updated : Jun 6, 2022, 5:29 PM IST