ಪ್ರತಿ ಹೆಕ್ಟರ್ಗೆ 50 ಸಾವಿರ ಬೆಳೆ ಪರಿಹಾರ ನೀಡಿ: ಮಾಜಿ ಸಚಿವ ಇಕ್ಬಾಲ್ ಅನ್ಸಾರಿ - Iqbal Ansari demands 50 thousand crop compensation per hectare
ಗಂಗಾವತಿ: ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿಯಲ್ಲಿ ಬೆಳೆ ಹಾನಿಗೀಡಾದ ರೈತರಿಗೆ ಹೆಕ್ಟೇರಿಗೆ ತಲಾ 25 ಸಾವಿರ ಹಣ ನೀಡಲಾಗಿತ್ತು. ಆದರೆ ಸದ್ಯ ಬೆಲೆ ಏರಿಕೆಗಳನ್ನು ಗಮನಿಸಿ ಹೆಕ್ಟೇರ್ಗೆ 50 ಸಾವಿರ ಪರಿಹಾರ ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆಗ್ರಹಿಸಿದ್ದಾರೆ. ಅಕಾಲಿಕ ಮಳೆ, ಬಿರುಗಾಳಿಯಿಂದ ಬೆಳೆ ಹಾನಿಗೀಡಾದ್ದು, ಕೊರೊನಾ ಹಾವಳಿ ಮುಗಿಯುವುದರೊಳಗೆ ಸಂಪುಟ ಸಭೆ ಸೇರಿ ಪ್ರತಿ ಹೆಕ್ಟೇರಿಗೆ ರೂ. 25 ಸಾವಿರ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.