ಕರ್ನಾಟಕ

karnataka

ETV Bharat / videos

ನಿಮ್ಮ ಪುಂಗಿ ನಮ್ಮ ಕಡೆ ನಡೆಯೋದಿಲ್ಲ: ಗಣೇಶ ಮಂಡಳಿಗಳಿಗೆ ಇನ್ಸ್​ಪೆಕ್ಟರ್​ ಸಜ್ಜನರ್​​ ಎಚ್ಚರಿಕೆ - ಈಟಿವಿ ಭಾರತ್ ಕನ್ನಡ ಸುದ್ದಿ

By

Published : Sep 9, 2022, 6:53 PM IST

ನಾವು ನಮ್ಮ ಪುಂಗಿ ಊದುತ್ತೇವೆ. ನಮ್ಮ ಪುಂಗಿ ಮುಂದ ನಿಮ್ಮ ಪುಂಗಿ ನಡಿಯೋದಿಲ್ಲ ಎಂದು ಗಣೇಶ ಮಂಡಳಿಗಳಿಗೆ ಪೊಲೀಸ್ ಅಧಿಕಾರಿ ಶಾಮರಾವ್ ಸಜ್ಜನರ್​​ ಹೇಳಿರುವ ವಿಡಿಯೋ ವೈರಲ್ ಆಗಿದೆ. ನಗರದ ಬೆಂಡಿಗೇರಿ ಪೊಲೀಸ್​ ಠಾಣೆಯ ಇನ್ಸ್‌ಪೆಕ್ಟರ್ ಸಜ್ಜನರ್​ ಅವರು ತಮ್ಮದೇ ಆದ ಶೈಲಿಯಲ್ಲಿ ತಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಎಚ್ಚರಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗಣೇಶ ನಿಮಜ್ಜನ ಮೆರವಣಿಗೆಯಲ್ಲಿ ಡಿಜೆ ಹಚ್ಚಲು ಅವಕಾಶ ನೀಡುವುದಿಲ್ಲ ಎಂಬ ಎಚ್ಚರಿಕೆ ನೀಡಿರುವ ಇನ್ಸ್‌ಪೆಕ್ಟರ್ ಸಜ್ಜನರ್​ ಅವರು, ಪರೋಕ್ಷವಾಗಿ ಪೊಲೀಸರ ಎದುರು ಯಾರೂ ಏನೂ ನಡೆಯೋದಿಲ್ಲ ಎಂದು ಹೇಳಿರುವ ವಿಡಿಯೋ ಈಗ ಚರ್ಚೆಗೆ ಗ್ರಾಸವಾಗಿದೆ.

ABOUT THE AUTHOR

...view details