ಸಮುದ್ರದಲ್ಲಿ ಸಿಲುಕಿದ್ದ 17 ಬಾಂಗ್ಲಾ ಮೀನುಗಾರರ ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್: ವಿಡಿಯೋ - ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರರ ರಕ್ಷಣೆ
ಭಾರಿ ಸುಳಿಗಾಳಿಯ ಮಧ್ಯೆಯೂ ಮೀನುಗಾರಿಕೆಗೆ ಇಳಿದು ಸಮುದ್ರದ ಮಧ್ಯೆ ಸಿಲುಕಿದ್ದ 17 ಬಾಂಗ್ಲಾದೇಶ ಮೀನುಗಾರರನ್ನು ಎರಡು ಹಂತದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ರಕ್ಷಿಸಿದೆ. ಬೆಳಗ್ಗೆ 10 ಜನರು ಸಮುದ್ರದಲ್ಲಿ ಸಿಲುಕಿದ್ದನ್ನು ಅರಿತು ಕಾರ್ಯಾಚರಣೆ ನಡೆಸಿ ರಕ್ಷಿಸಿದ ಐಸಿಜಿ ತಂಡ ಬಳಿಕ ಮತ್ತೆ 7 ಜನರ ಪ್ರಾಣ ಉಳಿಸಿದೆ. ಸಮುದ್ರದ ಭೋರ್ಗರೆತ, ದೊಡ್ಡ ಅಲೆಗಳ ಮಧ್ಯೆ ಸಾಹಸ ಮಾದರಿಯಲ್ಲಿ ಬಾಂಗ್ಲಾ ಮೀನುಗಾರರನ್ನು ರಕ್ಷಿಸಲಾಗಿದೆ.