ಟಿ20 ವಿಶ್ವಕಪ್‌ಗೆ ಭಾರತ ಶೇ. 90-95ರಷ್ಟು ಸಿದ್ಧ, ತಂಡದಲ್ಲಿ ಕೆಲ ಬದಲಾವಣೆ: ರೋಹಿತ್ ಶರ್ಮಾ - ಈಟಿವಿ ಭಾರತ ಕರ್ನಾಟಕ
ದುಬೈ(ಯುಎಇ): ಏಷ್ಯಾ ಕಪ್ನ ಸೂಪರ್ 4 ಹಂತದ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಟೀಂ ಇಂಡಿಯಾ ಪ್ರಶಸ್ತಿ ಸುತ್ತಿನಿಂದ ಬಹುತೇಕ ನಿರ್ಗಮಿಸಿದೆ. ಶ್ರೀಲಂಕಾ ವಿರುದ್ಧದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಕ್ಯಾಪ್ಟನ್ ರೋಹಿತ್ ಶರ್ಮಾ, ಟಿ20 ವಿಶ್ವಕಪ್ ಟೂರ್ನಿಗೆ ತಂಡ ಪ್ರಕಟಿಸುವವರೆಗೂ ನಾವು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಮತ್ತಷ್ಟು ಪ್ರಯೋಗ ಮಾಡಲಿದ್ದೇವೆ. ಪ್ರಸ್ತುತ ತಂಡ ಕಾಂಗರೂ ನಾಡಲ್ಲಿ ಟಿ20 ವಿಶ್ವಕಪ್ ಆಡಲು ಶೇ. 90-95ರಷ್ಟು ಸಿದ್ಧವಾಗಿದೆ. ತಂಡದಲ್ಲಿ ಕೆಲ ಬದಲಾವಣೆ ಮಾತ್ರ ಮಾಡಲಾಗುವುದು ಎಂದು ತಿಳಿಸಿದರು.