ಕಾಂಗ್ರೆಸ್ ನನ್ನ ದಾಖಲೆ ಹಾಳು ಮಾಡಿದೆ : ಅದರೊಂದಿಗೆ ಎಂದಿಗೂ ಕೆಲಸ ಮಾಡಲ್ಲ ಎಂದ ಪ್ರಶಾಂತ್ ಕಿಶೋರ್ - ಕಾಂಗ್ರೆಸ್ ಬಗ್ಗೆ ಪ್ರಶಾಂತ್ ಕಿಶೋರ್ ಮಾತು
2011ರಿಂದ 2021ರವರೆಗೂ ಒಟ್ಟು 11 ಚುನಾವಣೆಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ, ಕಾಂಗ್ರೆಸ್ ಜೊತೆ ಸೇರಿ ಉತ್ತರಪ್ರದೇಶದಲ್ಲಿ ಸೋತಿದ್ದೇನೆ. ನನ್ನ ಗೆಲುವಿನ ರೆಕಾರ್ಡ್ ಹಾಳು ಮಾಡಲು ಕೈಪಕ್ಷ ಮುಖ್ಯ ಕಾರಣವಾಗಿದೆ. ಹೀಗಾಗಿ, ಅವರೊಂದಿಗೆ ಕೆಲಸ ಮಾಡದಿರಲು ನಿರ್ಧರಿಸಿದ್ದೇನೆಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಬಿಹಾರದ ವೈಶಾಲಿಯಲ್ಲಿ ಮಾತನಾಡಿರುವ ಅವರು, ಈವರೆಗೆ ಒಟ್ಟು 11 ಚುನಾವಣೆಗಳಲ್ಲಿ ಕೆಲಸ ಮಾಡಿರುವ ನಾನು, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿ ಸೋತಿದ್ದೇನೆ. ಹೀಗಾಗಿ, ಅವರೊಂದಿಗೆ ಕೆಲಸ ಮಾಡದಿರಲು ನಿರ್ಧರಿಸಿದ್ದೇನೆ ಎಂದರು. ರಾಜಕೀಯ ವಲಯದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿರುವ ಪ್ರಶಾಂತ್ ಕಿಶೋರ್ ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್ ಸೇರಿಕೊಳ್ಳಲಿದ್ದಾರೆಂಬ ಮಾತು ಜೋರಾಗಿ ಕೇಳಿ ಬಂದಿತ್ತು. ಆದರೆ, ತಾವು ಪಾದಯಾತ್ರೆ ಮಾಡುವುದಾಗಿ ಘೋಷಣೆ ಮಾಡಿದ್ದರು.
Last Updated : May 31, 2022, 7:59 PM IST