ಕರ್ನಾಟಕ

karnataka

ETV Bharat / videos

ಮಂಡ್ಯದಲ್ಲಿ ಅಂಬಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ನಾನು: ಪುಟ್ಟರಾಜು - ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್

By

Published : Mar 29, 2019, 3:28 PM IST

ಮಂಡ್ಯ: ಜಿಲ್ಲೆಯಲ್ಲಿ ಅಂಬಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ನಾನು. ಅಂಬಿ ಕುಟುಂಬಕ್ಕೆ ನಾನೇನು ಮಾಡಿದ್ದೇನೆ ಅನ್ನೋದನ್ನ ಅಂಬಿ ಸಮಾಧಿ ಮುಂದೆ ನಿಂತು ಕೇಳಲಿ ಎಂದು ಸಚಿವ ಪುಟ್ಟರಾಜು ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ‌ಗೆ ಸವಾಲು ಹಾಕಿದರು. ಮಾಧ್ಯಮಗಳ ಜೊತೆ ಮಾತನಾಡಿದ ಪುಟ್ಟರಾಜು, ಸುಮಲತಾ ನನ್ನ ಆತ್ಮಾಭಿಮಾನದ ಪ್ರಶ್ನೆ ಮಾಡೋದು ಬೇಡ. ರಾಮನಗರದಲ್ಲಿ ಸೋತ ಬಳಿಕ ಮಂಡ್ಯಕ್ಕೆ ಕರೆತಂದಿದ್ದು ನಾನು. ನನ್ನ ಮನೆ ದುಡ್ಡು ಹಾಕಿ ಪ್ರಚಾರ ಮಾಡಿದೆ. ಅವರ ರಾಜಕೀಯ ಏಳಿಗೆಗಾಗಿ ಶ್ರಮಿಸಿದವನು ನಾನು. ಮಂಡ್ಯದಲ್ಲಿ ಅಂಬಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ನಾನು ಎಂದರು.

ABOUT THE AUTHOR

...view details