ಇದಪ್ಪಾ ಪ್ರೀತಿ.. ಹೆಗಲ ಮೇಲೆ ಪತ್ನಿ ಹೊತ್ತು 70 ಮೆಟ್ಟಿಲು ಏರಿದ ಪತಿ- ವೈರಲ್ ವಿಡಿಯೋ - ಬಾಲಾಜಿ ದರ್ಶನ
ತಿರುಮಲ(ಆಂಧ್ರಪ್ರದೇಶ): ದೇವಾಲಯಗಳಲ್ಲಿ ವೃದ್ಧ ತಂದೆ-ತಾಯಿಯನ್ನು ಹಾಗೂ ಪುಟ್ಟ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಸಾಗುವುದನ್ನು ನಾವು ನೋಡಿದ್ದೇವೆ. ಆದ್ರೆ ಪೂರ್ವ ಗೋದಾವರಿ ಜಿಲ್ಲೆಯ ಕಡಿಯಂ ಮಂಡಲದ ಕಡಿಯಾಪುಲಂಕದ ವರದಾ ವೀರವೆಂಕಟ ಸತ್ಯನಾರಾಯಣ (ಸತ್ತಿಬಾಬು) ಎಂಬುವರು ತಮ್ಮ ಪತ್ನಿಯನ್ನು ಹೆಗಲ ಮೇಲೆ ಹೊತ್ತು ಸುಮಾರು 70 ಮೆಟ್ಟಿಲು ಹತ್ತಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳೆದ 24 ವರ್ಷಗಳ ಹಿಂದೆ ಲಾವಣ್ಯ ಅವರನ್ನು ವಿವಾಹವಾದ ಸತ್ತಿಬಾಬುಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಬಾಲಾಜಿಯ ದರ್ಶನಕ್ಕಾಗಿ ದಂಪತಿ ಇತ್ತೀಚೆಗೆ ತಿರುಪತಿಗೆ ತೆರಳಿದ್ದರು. ಈ ವೇಳೆ ಪತಿ ಪತ್ನಿಯ ನಡುವೆ ನಡೆದ ಮೋಜಿನ ಮಾತುಕತೆ ಬಾಜಿ ಕಟ್ಟಲು ಕಾರಣವಾಗಿದ್ದು, ಬಾಹುಬಲಿಯಂತೆ ಸತ್ತಿಬಾಬು ಪತ್ನಿಯನ್ನು ಹೊತ್ತು ಸಾಗಿದ್ದಾರೆ. ಈ ದೃಶ್ಯಗಳನ್ನು ಇತರೆ ಭಕ್ತರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.