ಕರಾವಳಿಯಲ್ಲಿ ಕ್ಯಾರ್ ಚಂಡಮಾರುತ ಅಬ್ಬರ.. ಮಳೆ,ಗಾಳಿ, ಅಲೆಗಳ ಅಬ್ಬರಕ್ಕೆ ಜನ ಕಂಗಾಲು! - ಕರಾವಳಿಯಲ್ಲಿ ಕ್ಯಾರ್ ಚಂಡಮಾರುತ
ವಾಯುಭಾರ ಕುಸಿತದ ಬಳಿಕ ಕರಾವಳಿ ಪ್ರವೇಶಿಸುತ್ತಿರುವ ಕ್ಯಾರ್ ಚಂಡಮಾರುತಕ್ಕೆ ಕಡಲತೀರದ ಜನ ತತ್ತರಿಸಿದ್ದಾರೆ. ತಡರಾತ್ರಿಯಿಂದ ಕರಾವಳಿ ಉದ್ದಕ್ಕೂ ಗಾಳಿ-ಮಳೆ ಅಬ್ಬರ ಜೋರಾಗಿದೆ. ಸಮುದ್ರದ ಅಲೆಗಳು ಕೂಡ ಬೊಬ್ಬಿರಿಯುತ್ತಿದ್ದು, ತೀರದಂಚಿನ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ.