ಕರ್ನಾಟಕ

karnataka

ETV Bharat / videos

ಕಲ್ಲಿದ್ದಲು ಘಟಕದಲ್ಲಿ ಅವಘಡ: ಕೂದಲೆಳೆ ಅಂತರದಲ್ಲಿ ನೂರೈವತ್ತು ಕಾರ್ಮಿಕರು ಪಾರು - ಈಟಿವಿ ಭಾರತ ಕನ್ನಡ

By

Published : Oct 10, 2022, 9:39 PM IST

ಪಾಂಡವೇಶ್ವರ(ಪಶ್ಚಿಮ ಬಂಗಾಳ) : ಇಲ್ಲಿನ ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್‌ನ ಸೋನೆಪುರ್ ಬಜಾರಿ ಕಲ್ಲಿದ್ದಲು ಗಣಿ ನಿರ್ವಹಣಾ ಘಟಕದ ಕಬ್ಬಿಣದ ಸ್ಥಾವರ ಕುಸಿದಿದೆ. ಅಲ್ಲಿದ್ದ 150ಕ್ಕೂ ಹೆಚ್ಚು ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕಾರ್ಮಿಕರು ಮಧ್ಯಾಹ್ನ ಊಟಕ್ಕೆ ತೆರಳಿದ ವೇಳೆ ಘಟನೆ ಸಂಭವಿಸಿದ್ದರಿಂದ ಕಾರ್ಮಿಕರು ಬಚಾವಾಗಿದ್ದಾರೆ. ಈ ಘಟನೆಗೆ ಈಸಿಎಲ್​ನ ನಿರ್ಲಕ್ಷ್ಯವೇ ಕಾರಣ ಎಂದು ಕಾರ್ಮಿಕ ಸಂಘಟನೆಗಳು ದೂರುತ್ತಿವೆ. ನಿಯಮಾನುಸಾರ ನಿರ್ವಹಣೆ ಮಾಡದ ಕಾರಣ ಕಬ್ಬಿಣದ ಶೆಡ್​ ಕುಸಿದಿದೆ ಎಂದು ಆರೋಪಿಸಿದ್ದಾರೆ. ಆದರೆ ಕಂಪನಿಯ ಅಧಿಕಾರಿಗಳು ಆರೋಪವನ್ನು ತಳ್ಳಿ ಹಾಕುತ್ತಿದ್ದು ನಿರ್ವಹಣೆ ಸರಿಯಾಗಿ ಮಾಡಲಾಗಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ.

ABOUT THE AUTHOR

...view details