ಬೆಟ್ಟದಲ್ಲಿ ಬಿರುಕು: ಬ್ರಹ್ಮಗಿರಿ ಬೆಟ್ಟಕ್ಕೆ ಲಾವಾಂಚ ಆಗಲಿದೆಯೇ ಆಸರೇ..?
ಕೊಡಗು ಜಿಲ್ಲೆಗೆ ಪರ್ವತ ಶ್ರೇಣಿಗಳು ಭೂಷಣ. ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಪ್ರವಾಹದ ಭೀತಿ ಎದುರಾಗಿದೆ. ಅತಿಯಾದ ಮಳೆಗೆ ಮಣ್ಣು ಸಡಿಲಗೊಂಡು ಜರಿಯುತ್ತಿದೆ. ಜೀವನದಿ ಕಾವೇರಿಯ ಉಗಮ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಕಾಣಿಸಿಕೊಂಡಿರುವ ಬೃಹತ್ ಬಿರುಕು ತಡೆಯಲು ದೇವಾಲಯದ ಅರ್ಚಕ ಮಂಡಳಿ, ಕಾಲೇಜೊಂದರ ಎನ್‌ಎಸ್ಎಸ್ ಸ್ವಯಂ ಸೇವಕರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಕೈ ಜೋಡಿಸಿದ್ದು, ಲಾವಾಂಚ ಜಾತಿ ಹುಲ್ಲನ್ನು ಬರೆ ಕುಸಿದಿರುವ ಜಾಗದಲ್ಲಿ ನೆಟ್ಟು ಪರಿಸರ ಕಾಳಜಿ ಮೆರೆದಿದ್ದಾರೆ.