ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಕಾರಿಗೆ ಅಂಟಿಸಿ ದೇಶಪ್ರೇಮ ಮೆರೆದ ವ್ಯಕ್ತಿ - ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ
ಹುಬ್ಬಳ್ಳಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಹುಬ್ಬಳ್ಳಿಯ ವ್ಯಕ್ತಿಯೊಬ್ಬ ತನ್ನ ಕಾರಿಗೆ ಸಂಪೂರ್ಣವಾಗಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಅಂಟಿಸುವ ಮೂಲಕ ದೇಶಾಭಿಮಾನ ಮೆರೆದಿದ್ದಾನೆ. ವಿದ್ಯಾ ನಗರದ ನಿವಾಸಿ ಗುರುರಾಜ್ ಕಿತ್ತೂರ ಎಂಬಾತ ತನ್ನ ಕಾರಿಗೆ ಸಂಪೂರ್ಣ ದೇಶಭಕ್ತಿ ಸಾರುವ ಭಾವಚಿತ್ರಗಳನ್ನು ರೆಡಿಯಂ ಮಾಡಿದ್ದಾರೆ. ಕಾರಿನ ಎರಡೂ ಬದಿಗಳಲ್ಲಿ ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ತಿಲಕ್, ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿದಂತೆ ಅನೇಕರ ಭಾವಚಿತ್ರಗಳನ್ನು ಹಾಕಿಸಿದ್ದಾರೆ. ಇವರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಗುರುರಾಜ್ ಕಿತ್ತೂರು ಆರ್ಟಿಸ್ಟ್ ಆಗಿದ್ದು, ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವಕ್ಕೆ ವಿಶೇಷ ಪರಿಕಲ್ಪನೆಯಲ್ಲಿ ತಮ್ಮ ಕಾರಿಗೆ ಅಲಂಕಾರ ಮಾಡಿ ನಗರದಾದ್ಯಂತ ರ‍್ಯಾಲಿ ಮಾಡಿ ಜನರಲ್ಲಿ ದೇಶಾಭಿಮಾನ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.