ಮನಕಲಕುವ ದೃಶ್ಯ: ಗಾಯಗೊಂಡ ತಾಯಿ ಮಡಿಲಲ್ಲಿ ತಲೆ ಇಟ್ಟು ಬಿಕ್ಕಿ ಬಿಕ್ಕಿ ಅಳುತ್ತಿರುವ ಕಂದಮ್ಮ - baby cries in front of injured mother
ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ಕರುಳು ಹಿಂಡುವ ದೃಶ್ಯವೊಂದು ಕಂಡು ಬಂದಿದೆ. ತಾರಿಹಾಳ ಬಳಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ತಾಯಿಯ ಮಡಿಲಲ್ಲಿ ತಲೆ ಇಟ್ಟು ಮಗು ಬಿಕ್ಕಿ ಬಿಕ್ಕಿ ಅಳುತ್ತಿದೆ. ತೀವ್ರ ನೋವಿನಲ್ಲಿಯೂ ತಾಯಿ ಆ್ಯಂಬುಲೆನ್ಸ್‌ನಲ್ಲಿ ಮಗುವನ್ನು ಎತ್ತಿಕೊಂಡು ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ. ತಾಯಿಯ ಸ್ಥಿತಿ ಕಂಡು ಮಹಾರಾಷ್ಟ್ರ ಮಹೇಂದ್ರ ಎಂಬ ಒಂದೂವರೆ ವರ್ಷದ ಕಂದ ಆಕ್ರಂದನ ಪಡುತ್ತಿದೆ. ಮಹೇಂದ್ರ ತಾಯಿ ಜ್ಯೋತಿ ಎಂಬುವರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ತಾಯಿ ಜತೆಗೆ ಅದೇ ಬಸ್ನಲ್ಲಿ ಈ ಮಗು ಕೂಡ ಪ್ರಯಾಣ ಮಾಡುತ್ತಿತ್ತು. ಅದೃಷ್ಟವಶಾತ್ ಮಗುವಿಗೆ ಯಾವುದೇ ಅಪಾಯವಾಗಿಲ್ಲ.