ಹೊಸಕೋಟೆ ಉಪಚುನಾವಣೆ: ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಶರತ್ ಬಚ್ಚೇಗೌಡ - ವಿಜಯಪುರದ ಮನೆ ದೇವರು ಚೆನ್ನಕೇಶವ ಸ್ಚಾಮಿಗೆ ವಿಶೇಷ ಪೂಜೆ
ಹೊಸಕೋಟೆ ಉಪಚುನಾವಣಾ ಕಣ ರಂಗೇರುತ್ತಿದ್ದು, ಇಂದು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಸಿದ್ದಾರೆ. ಬಳಿಕ ಕುಟುಂಬ ಸಮೇತರಾಗಿ ಅವರು ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿರುವ ಮನೆ ದೇವರು ಚೆನ್ನಕೇಶವ ದೇಗುಲಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.