ಕಳೆದ 2 ಬಾರಿಯೂ ಕ್ಯಾಬಿನೆಟ್ ಸಭೆಗೆ ಉಮೇಶ್ ಕತ್ತಿ ಹಾಜರಾಗಿರಲಿಲ್ಲ: ಆರಗ ಜ್ಞಾನೇಂದ್ರ - ಉಮೇಶ್ ಕತ್ತಿ
ತುಮಕೂರು: ಕಳೆದ ಎರಡು ಬಾರಿಯೂ ಕ್ಯಾಬಿನೆಟ್ ಸಭೆಗೆ ಉಮೇಶ್ ಕತ್ತಿ ಹಾಜರಾಗಿರಲಿಲ್ಲ. ಆಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇತ್ತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಉಮೇಶ್ ಕತ್ತಿ ಹಾಸ್ಯ ಪ್ರಜ್ಞೆ ಉಳ್ಳವರಾಗಿದ್ದರು. ಅವರು ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳುತ್ತಿರಲಿಲ್ಲ. ಅಂತಿಮ ದರ್ಶನ ಪಡೆಯುವ ಉದ್ದೇಶದಿಂದ ಇಂದು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳನ್ನು ಮುಂದೂಡುತ್ತಿದ್ದೇನೆ ಎಂದರು.