ರಂಜಿಸುತ್ತಾ ವಾಹನ ದಟ್ಟಣೆ ಕ್ಲಿಯರ್ ಮಾಡುವ ಹೋಮ್ ಗಾರ್ಡ್: ವಿಡಿಯೋ ನೋಡಿ - ಉತ್ತರಾಖಂಡ ಟ್ರಾಫಿಕ್ ಪೊಲೀಸ್
ಡೆಹ್ರಾಡೂನ್‌ನ ಹೃದ್ರೋಗ ಆಸ್ಪತ್ರೆಯ ಮುಂಭಾಗ ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಪೊಲೀಸ್ ಸಿಬ್ಬಂದಿಯಾಗಿ ನಿಯೋಜಿಸಲಾದ ಗೃಹರಕ್ಷಕ ದಳದ ಜೋಗೇಂದ್ರ ಕುಮಾರ್ ಅವರು ವಿಶಿಷ್ಟ ರೀತಿಯಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸುತ್ತಿರುವುದು ಗಮನ ಸೆಳೆದಿದೆ. ಆ ರಸ್ತೆ ಮಾರ್ಗವಾಗಿ ಬರುವ ವಾಹನಗಳನ್ನು ಪ್ರೀತಿಯಿಂದ ಬರ ಮಾಡಿಕೊಳ್ಳುತ್ತ ಸಂಜ್ಞೆಯ ಮೂಲಕ ನಗುಮೊಗದಲ್ಲಿ ಕಳುಹಿಸಿಕೊಡುತ್ತಿದ್ದಾರೆ. ಇದು ವಾಹನ ಸವಾರರನ್ನು ರಂಜಿಸಿದೆ. "ನನ್ನ ಈ ವಿಶಿಷ್ಟ ವರ್ತನೆ ಜನರಿಗೆ ಇಷ್ಟವಾಗಲಿ ಎಂದು ಮಾಡುತ್ತಿರುವೆ. ವಾಹನ ದಟ್ಟಣೆಯಲ್ಲಿ ಸಿಲುಕಿದಾಗ ಜನರು ಆನಂದಿಸುತ್ತ ಗಮ್ಯಸ್ಥಾನ ತಲುಪಲಿ ಎಂಬುದು ನನ್ನ ಉದ್ದೇಶ. ಈ ಕೆಲಸವನ್ನು ನಾನೂ ಆನಂದಿಸುತ್ತಿದ್ದೇನೆ" ಎಂದು ಹೋಮ್ ಗಾರ್ಡ್ ಜೋಗೇಂದ್ರ ಕುಮಾರ್ ಹೇಳುತ್ತಾರೆ.