ಕರ್ನಾಟಕ

karnataka

ETV Bharat / videos

ಬಾಗಲಕೋಟೆಯಲ್ಲಿ ಆರ್​ಎಸ್​ಎಸ್​​ ಪಥಸಂಚಲನ : ಗಮನ ಸೆಳೆದ ಗಣವೇಷಧಾರಿಗಳು - ಈಟಿವಿ ಭಾರತ ಕನ್ನಡ

By

Published : Oct 9, 2022, 11:08 PM IST

ಬಾಗಲಕೋಟೆ : ನಗರದಲ್ಲಿ ಆರ್​ಎಸ್​ಎಸ್ ಪಥಸಂಚಲನ ಆಕರ್ಷಕವಾಗಿದ್ದು, ಐತಿಹಾಸಿಕ ಹಿನ್ನೆಲೆ ಪಡೆದುಕೊಂಡಿದೆ. ಪ್ರತಿವರ್ಷ ವಿಜಯದಶಮಿ ಆದ ಬಳಿಕ ಬರುವ ಭಾನುವಾರದಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆ ವತಿಯಿಂದ ಪಥಸಂಚಲನ ನಡೆಯುತ್ತದೆ. ಇಂದು ನಡೆದ ಪಥಸಂಚಲನದಲ್ಲಿ ಮಹಾನ್​ ವ್ಯಕ್ತಿಗಳ ವೇಷದಲ್ಲಿ ಪುಟಾಣಿಗಳು ಗಮನ ಸೆಳೆದರು. ಬಸವೇಶ್ವರ ವಿದ್ಯಾವರ್ಧಕ ಸಂಘ ಮೈದಾನದಲ್ಲಿ ಏಕಕಾಲಕ್ಕೆ ಸುಮಾರು 2 ಸಾವಿರ ಗಣವೇಷಧಾರಿಗಳು ಪಥಸಂಚಲನ ಪ್ರಾರಂಭಿಸಿದರು. ಬಸವೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಂಘದ ಪ್ರಾಂತ ಸಂಚಾಲಕರಾದ ಸಿ. ನರೇಂದ್ರ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಕುಲಪತಿ ಇಂದ್ರೇಶ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ABOUT THE AUTHOR

...view details