ಲೂಧಿಯಾನದಲ್ಲಿ ಮಾದಕವ್ಯಸನಿ ಕಾನ್ಸ್ಟೇಬಲ್ ವಿಡಿಯೋ ವೈರಲ್ - ಲೂಧಿಯಾನದಲ್ಲಿ ಮಾದಕವ್ಯಸನಿ ಕಾನ್ಸ್ಟೇಬಲ್
ಸಾರ್ವಜನಿಕರು ಹಾಗೂ ಪೊಲೀಸ್ ಕಾನ್ಸ್ಟೇಬಲ್ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಪಂಜಾಬ್ನ ಲೂಧಿಯಾನದಲ್ಲಿ ನಡೆದಿದೆ. ಘಟನೆಯ ಪ್ರಕಾರ, ಯುವಕನೊಬ್ಬ ನಾಯಿ ಕಡಿತಕ್ಕೆ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದಾಗ ಅವರನ್ನು ಅಡ್ಡಗಟ್ಟಿ ಬೈಕ್ನ ಡಾಕ್ಯುಮೆಂಟ್ಸ್ಗಳನ್ನು ಕಾನ್ಸ್ಟೇಬಲ್ ಕೇಳಿದ್ದಾರೆ. ಅಲ್ಲದೇ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇದರಿಂದ ಕುಪಿತಗೊಂಡ ಸಾರ್ವಜನಿಕರು ಅವರ ನಾಮಫಲಕವನ್ನು ಕೇಳಿದ್ದಾರೆ. ಇದಕ್ಕೆ ಕಾನ್ಸ್ಟೇಬಲ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನಂತರ ಅವರು ಮಾದಕ ದ್ರವ್ಯ ಸೇವಿಸಿದ್ದರು ಎಂಬುದು ತಿಳಿದು ಬಂದಿದ್ದರಿಂದ ಹತ್ತಿರ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಬಗ್ಗೆ ಎಸಿಪಿ ಸೆಂಟ್ರಲ್ ರಮಣದೀಪ್ ಭುಲ್ಲಾರ್ ಅವರು ಪ್ರತಿಕ್ರಿಯಿಸಿದ್ದು, ಕಾನ್ಸ್ಟೇಬಲ್ ಮಾದಕ ವ್ಯಸನಿಗಳಾಗಿದ್ದು, ವೈದ್ಯಕೀಯ ತಪಾಸಣೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.