ಕರ್ನಾಟಕ

karnataka

ETV Bharat / videos

'ಈ ಸಲ ಕಪ್ ನಮ್ದೆ' ಎಂದು ಕುಣಿದ ಯುವಕರ ಬೆನ್ನು ತಟ್ಟಿದ ಹ್ಯಾಟ್ರಿಕ್​ ಹೀರೋ - Doddaballapura news

By

Published : Oct 26, 2020, 7:35 AM IST

ದೊಡ್ಡಬಳ್ಳಾಪುರ: ಐಪಿಎಲ್ ಅಂದ್ರೆ ಹಬ್ಬ ಮಾಡೋ ಎಷ್ಟೋ ಮಂದಿ ಅದರ ಬಗ್ಗೆ ಪಂಚಿಂಗ್​ ಡೈಲಾಗ್ಸ್​, ಟ್ರೋಲ್ಸ್​, ಕವನ ಬರೆದರೆ, ದೊಡ್ಡಬಳ್ಳಾಪುರದ ಯುವಕರು ಅವರೆಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಡ್ರೀಮ್​​ ಮಾರಿಯರ್ಸ್​ ಅರ್ಪಿಸುವ 'ಈ ಸಲ ಕಪ್ ನಮ್ದೆ' ಎಂಬ ವಿಡಿಯೋ ಸಾಂಗ್​ ತಯಾರಾಗಿದ್ದು, ಅದರ ನಿರ್ದೇಶನ ಮತ್ತು ಕೊರಿಯೋಗ್ರಾಫಿಯನ್ನು ಪ್ರಸಿ ಮಾಸ್ಟರ್​ ಮಾಡಿದ್ದಾರೆ. ನಿರ್ಮಾಪಕರಾಗಿ ಅಪ್ಪಣ್ಣ ಬಿ.ಎಸ್.​ ಮತ್ತು ಬಾಲಾಂಜಿನಪ್ಪ ಹಣ ಕೊಟ್ಟು ಹುಡುಗರ ಪ್ರತಿಭೆ ಅನಾವರಣಕ್ಕೆ ಅವಕಾಶ ನೀಡಿದ್ದಾರೆ. ಇದಕ್ಕೆ ಪ್ರತಾಪ್ ಸಾಹಿತ್ಯ ಬರೆದಿದ್ದು, ಅವರೇ ಹಾಡಿದ್ದಾರೆ. ಆರ್​ಸಿಬಿ ತಂಡದ ರಿಸರ್ವ್​ ಆಟಗಾರನಾಗಿ ಆಯ್ಕೆಯಾಗಿದ್ದ ಮಹೇಶ್ ಕುಮಾರ್​ ಸಾಂಗ್​​​ನಲ್ಲಿ ಪ್ರಮುಖ ಡ್ಯಾನ್ಸರ್ ಆಗಿ ಗಮನ ಸೆಳೆದಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್​ ಈ ವಿಡಿಯೋ ನೋಡಿ ಯುವಕರ ಬೆನ್ನು ತಟ್ಟಿದ್ದಾರೆ.

ABOUT THE AUTHOR

...view details