ವಸತಿ ಪ್ರದೇಶಕ್ಕೆ ನುಗ್ಗಿ ಹಲಸಿನ ಹಣ್ಣು ತಿಂದು ವಾಪಸ್ಸಾದ ಆನೆಗಳು..! - ಪಶ್ಚಿಮ ಬಂಗಾಳ ಲಾಕ್ ಡೌನ್
ಸಿಲಿಗುರಿ (ಪಶ್ಚಿಮ ಬಂಗಾಳ): ಬೈಕುಂತುಪುರ್ ಅರಣ್ಯದಿಂದ ವಸತಿ ಪ್ರದೇಶಕ್ಕೆ ನುಗ್ಗಿದ ಆನೆಗಳ ಗುಂಪು ಯಾವುದೇ ಹಾನಿ ಮಾಡದೇ ಮರದಲ್ಲಿನ ಹಲಸಿನ ಹಣ್ಣುಗಳನ್ನು ತಿಂದು ವಾಪಸ್ಸಾದ ಘಟನೆ ಸಿಲಿಗುರಿಯಲ್ಲಿ ನಡೆದಿದೆ. ನಗರದ 37 ಹಾಗೂ 38ನೇ ವಾರ್ಡ್ಗಳಿಗೆ ಮುಂಜಾನೆ 2.30ರ ವೇಳೆಗೆ ಆನೆಗಳು ನುಗ್ಗಿದ್ದು, ಇಂತಹ ಘಟನೆಗಳು ಆಗಾಗ ಸಂಭವಿಸುತ್ತವೆ ಎಂದು ಸ್ಥಳೀಯರು ಹೇಳಿದ್ದಾರೆ.