ಕರ್ನಾಟಕ

karnataka

ETV Bharat / videos

ಹೊಸಪೇಟೆ: ಸೀತಾರಾಮ್ ತಾಂಡಾದಲ್ಲಿ ಗಾಳಿ ಅಬ್ಬರ, ಧರೆಗುರುಳಿದ ವಿದ್ಯುತ್​ ಕಂಬಗಳು - ಹೊಸಪೇಟೆಯಲ್ಲಿ ಗಾಳಿ ಅಬ್ಬರ

By

Published : Jun 8, 2022, 7:39 AM IST

ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕಿನ ಸೀತಾರಾಮ್ ತಾಂಡಾ ಪ್ರದೇಶದಲ್ಲಿ ಬೀಸಿದ ಭಾರಿ ಗಾಳಿಗೆ ಹಲವು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಟ್ರಾನ್ಸ್​ಫಾರ್ಮರ್ ಸ್ಫೋಟಗೊಂಡು ಆತಂಕ ಸೃಷ್ಟಿಸಿತ್ತು. ಮಂಗಳವಾರ ತಡರಾತ್ರಿ ಗಾಳಿ ಅಬ್ಬರದಿಂದ ಅನಾಹುತ ಸಂಭವಿಸಿದೆ. ಗ್ರಾಮದ ಶಾಲೆಯ ಹೊರಭಾಗದ ಶೆಡ್​ನ ಶೀಟ್​​ಗಳು ಕೂಡ ಗಾಳಿಯಿಂದ ಹಾರಿಬಿದ್ದಿವೆ. ಟ್ರಾನ್ಸ್​ಫಾರ್ಮರ್ ಸ್ಫೋಟದಿಂದ ಗ್ರಾಮದಲ್ಲಿ ವಿದ್ಯುತ್‌ ಇಲ್ಲದೆ ಜನರು ಪರದಾಡುವಂತಾಗಿದೆ. ಕೆಲ ಸಮಯ ಬೀಸಿದ ಭಾರಿ ಗಾಳಿಗೆ ಗ್ರಾಮಸ್ಥರು ಬೆಚ್ಚಿ ಬೀಳುವಂತಾಗಿದೆ.

ABOUT THE AUTHOR

...view details