ಬಿಸಿಲಿನ ಝಳಕ್ಕೆ ಕಂಗೆಟ್ಟಿದ್ದ ಹೈದರಾಬಾದ್ಗೆ ತಂಪೆರೆದ ಮಳೆರಾಯ - ಹೈದರಾಬಾದ್ ಮಳೆ
ಹೈದರಾಬಾದ್: ಕಳೆದ ಕೆಲ ತಿಂಗಳಿಂದ ಸೂರ್ಯನ ಬಿಸಿಲಿನ ಶಾಕ್ನಿಂದ ಕಂಗೆಟ್ಟಿದ್ದ ಹೈದರಾಬಾದ್ ಜನತೆಗೆ ಇಂದು ಮಳೆರಾಯ ತಂಪೆರೆದಿದ್ದಾನೆ. ಸಂಜೆಯಾಗ್ತಿದ್ದಂತೆ ದಿಢೀರ್ ಆಗಿ ಗುಡುಗುಸಹಿತ ಮಳೆ ಸುರಿಯಿತು. ಇದರಿಂದ ಕೆಲವೆಡೆ ಹಾನಿಯಾಗಿದ್ದು, ಮಲಕಪೇಟೆಯಲ್ಲಿ ಬೈಕ್ ಮೇಲೆ ಮರ ಕುಸಿದು ಬಿದ್ದಿದೆ. ಪ್ರಮುಖವಾಗಿ ಕುಕಟಪಲ್ಲಿ, ಎಲ್‌ಬಿ ನಗರ, ಕೋಟಿ, ಕೊಂಡಾಪುರ ಸೇರಿದಂತೆ ಅನೇಕಡೆ ಮಳೆಯಾಗಿದೆ. ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು.