ಕರ್ನಾಟಕ

karnataka

ETV Bharat / videos

ಮಳೆಗೆ ಕನಿಷ್ಠ 13 ಮಂದಿ ಸಾವು: ಗುರುಗ್ರಾಮ್‌ನ ಹಲವು ಭಾಗ ಜಲಾವೃತ, ವರ್ಕ್​​​ ಫ್ರಂ ಹೋಮ್​​ ಘೋಷಣೆ​ - Etv bharat kannada

By

Published : Sep 23, 2022, 10:34 AM IST

ನವದೆಹಲಿ: ನಿರಂತರ ಮಳೆಯಿಂದಾಗಿ ಹರಿಯಾಣದ ಗುರುಗ್ರಾಮ್‌ನ ಹಲವು ಭಾಗಗಳು ಜಲಾವೃತವಾಗಿದೆ. ದೆಹಲಿಯ ಎನ್‌ಸಿಆರ್‌ ಪ್ರದೇಶದ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಜೊತೆಗೆ ಭಾರಿ ಮಳೆ ಹಿನ್ನೆಲೆಯಲ್ಲಿ ಗುರುಗ್ರಾಮ್ ಮತ್ತು ನೋಯ್ಡಾದ ಬಹುತೇಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಗುರುಗ್ರಾಮ್​ನ ಕಾರ್ಪೊರೇಟ್‌ ಸಂಸ್ಥೆಗಳು ಸಹ ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸಲಹೆ ನೀಡಿದೆ. ಜೊತೆಗೆ ಉತ್ತರ ಪ್ರದೇಶದ ಫಿರೋಜಾಬಾದ್‌ ಸೇರಿದಂತೆ ಕೆಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಜನಜೀವನದ ಅಸ್ತವ್ಯಸ್ತಗೊಂಡಿದೆ. ಗುಡುಗು, ಸಿಡಿಲು ಮತ್ತು ಮನೆ ಗೋಡೆ ಕುಸಿದ ಘಟನೆಗಳಿಂದಾಗಿ ಕನಿಷ್ಠ 13 ಜನರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ.

ABOUT THE AUTHOR

...view details