ಯಾದಗಿರಿಯಲ್ಲಿ ಧಾರಾಕಾರ ಮಳೆ: ಜೋಪಡಿಗಳಿಗೆ ನುಗ್ಗಿದ ನೀರು - ಅಲೆಮಾರಿ ನಿವಾಸಿಗಳು
ಯಾದಗಿರಿ: ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಶಹಾಪುರ ನಗರದಲ್ಲಿ ಅವಾಂತರಗಳೇ ಸೃಷ್ಟಿಯಾಗಿದ್ದು, ಜನರು ಹೈರಾಣಾಗಿದ್ದಾರೆ. ಹಳ್ಳಳ್ಳಿ ಗ್ರಾಮದ 20ಕ್ಕೂ ಅಧಿಕ ಜೋಪಡಿಗಳಿಗೆ ನೀರು ನುಗ್ಗಿದ್ದರಿಂದ ಅಲ್ಲಿನ ಅಲೆಮಾರಿ ನಿವಾಸಿಗಳು ಪರದಾಡುವಂತಾಯಿತು. ನಿರಂತರ ಮಳೆಯಿಂದಾಗಿ ಮನೆಯೊಳಗೆ ನೀರು ನುಗ್ಗಿದೆ.