ಮಳೆಯೋ ಪ್ರವಾಹವೋ.. ನೀರಿನಲ್ಲಿ ಕೊಚ್ಚಿಕೊಂಡು ಹೋದ ಕಾರುಗಳು: ವಿಡಿಯೋ - ಜೋಧಪುರದಲ್ಲಿ ಮಳೆ ನೀರಿಗೆ ಕೊಚ್ಚಿಹೋದ ಕಾರುಗಳು
ದೇಶದ ವಿವಿಧೆಡೆ ಮುಂಗಾರು ಮಳೆಯಬ್ಬರ ಮುಂದುವರೆದಿದೆ. ರಾಜಸ್ಥಾನದಲ್ಲಿ ನಿನ್ನೆ ರಾತ್ರಿ(ಜುಲೈ 25) ವಿಪರೀತ ಮಳೆ ಸುರಿಯಿತು. ರಸ್ತೆಗಳಲ್ಲಿ ನೀರು ಪ್ರವಾಹದಂತೆ ಹರಿದುಬಂದಿದೆ. ಜೋಧಪುರದ ರಸ್ತೆಯೊಂದರಲ್ಲಿ ನಿಲ್ಲಿಸಲಾಗಿದ್ದ ಕಾರುಗಳು ಮಳೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದವು.