ಮಳೆಯ ರೌದ್ರಾವತಾರ, ಎಲ್ಲೆಂದರಲ್ಲಿ ಹರಿಯುತ್ತಿರುವ ನದಿಗಳು... ಬದುಕು ಮೂರಾಬಟ್ಟೆ - ಪ್ರವಾಹದ ನೀರಿನಲ್ಲಿ ಜನರ ಕಣ್ಣೀರೇ ಕಾಣದಾಗಿದೆ
ಮಹಾರಾಷ್ಟ್ರದಲ್ಲಿ ಆಗುತ್ತಿರುವ ಮಳೆಯಿಂದ ಉತ್ತರ ಕರ್ನಾಟಕದ ಜಿಲ್ಲೆಗಳು ಜಲದಿಗ್ಬಂಧನ ಅನುಭವಿಸುತ್ತಿವೆ. ಪ್ರವಾಹದ ನೀರಿನಲ್ಲಿ ಜನರ ಕಣ್ಣೀರೇ ಕಾಣದಾಗಿದೆ. ಭೀಮಾ ನದಿ ಮೈದುಂಬಿ ಹರಿಯಲಿ ಎಂದು ಎದುರು ನೋಡುತ್ತಿದ್ದ ಜನಕ್ಕೆ ಪ್ರವಾಹ ಮರ್ಮಾಘಾತ ನೀಡಿದೆ. ಮಳೆಯನ್ನೇ ನೋಡದೆ ಕಲಬುರಗಿಯ ಜನ ನೆರೆಗೆ ವಿಲ ವಿಲ ಒದ್ದಾಡುತ್ತಿದ್ದಾರೆ.