ವಿಡಿಯೋ ನೋಡಿ: ಗಾಳಿಗೆ ಹಾರಿ ಬಂದ ತಗಡು, ಪವಾಡ ಸದೃಶದಂತೆ ಪಾರಾದ ವ್ಯಕ್ತಿ! - metal sheet jumped video
ಕುಷ್ಟಗಿ: ನಿನ್ನೆ ಸಂಜೆ ಬೀಸಿದ ಬಿರುಗಾಳಿ ಹಾಗು ರಣಮಳೆಗೆ ತಾವರಗೇರಾ ಪಟ್ಟಣ ಅಸ್ತವ್ಯಸ್ತವಾಗಿದೆ. ಗಾಳಿಯ ರಭಸಕ್ಕೆ ಶೆಡ್ವೊಂದರಿಂದ ತಗಡು ಹಾರಿದ್ದು ವ್ಯಕ್ತಿಯೋರ್ವ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದರು. ಸಂಜೆ ಇದ್ದಕ್ಕಿದ್ದಂತೆ ಬಿರುಗಾಳಿ ಶುರುವಾಗಿದೆ. ನಾಲ್ಕು ನಿಮಿಷ ಬೀಸಿದ ಬಿರುಗಾಳಿಗೆ ಸಣ್ಣಪುಟ್ಟ ವಸ್ತುಗಳೆಲ್ಲ ಗಾಳಿಗೆ ಸಿಲುಕಿ ಚೆಲ್ಲಾಪಿಲ್ಲಿಯಾಗಿವೆ.