ಹೈದರಾಬಾದ್ನಲ್ಲಿ ಮಳೆಯಾರ್ಭಟ.. ರಸ್ತೆಗಳು ಜಲಾವೃತ, ಟ್ರಾಫಿಕ್ ಜಾಮ್ - Etv Bharat
ನಗರದಲ್ಲಿ ಕೆಲ ದಿನ ಬಿಡುವು ನೀಡಿದ್ದ ಮಳೆ ಇಂದು ನಿರಂತರವಾಗಿ ಸುರಿದ ಕಾರಣ ತೆಲಂಗಾಣ ಜನರು ಹೈರಾಣಾಗಿದ್ದಾರೆ. ಬೆಳಗ್ಗೆಯಿಂದಲೂ ಧಾರಾಕಾರವಾಗಿ ಮಳೆ ಸುರಿದಿದೆ. ಹೀಗಾಗಿ ರಸ್ತೆಗಳು ಜಲಾವೃತಗೊಂಡಿದ್ದು, ಕೆಲವೊಂದು ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಮುಖ್ಯವಾಗಿ ಕೋಟೆ,ಸುಲ್ತಾನ್ಬಜಾರ್,ಬೇಗಂ ಬಜಾರ್, ಲಕಡಿಕಪೂಲ್ ಸೇರಿದಂತೆ ಅನೇಕ ಕಡೆ ಜನರು ತೊಂದರೆ ಅನುಭವಿಸಿದ್ದಾರೆ. ಭರ್ಜರಿ ಮಳೆಗೆ ರಸ್ತೆಗಳಲ್ಲೆಲ್ಲ ನೀರು ತುಂಬಿ, ಮನೆಗಳಿಗೆ ನುಗ್ಗಿದೆ.