ಕರ್ನಾಟಕ

karnataka

ETV Bharat / videos

ಗಂಗಾವತಿಯಲ್ಲಿ ಭಾರಿ ಮಳೆ; 500ಕ್ಕೂ ಹೆಚ್ಚು ಎಕರೆಯಲ್ಲಿದ್ದ ಭತ್ತ ಜಲಾವೃತ - Heavy Rain In Gangavathi

By

Published : Aug 2, 2022, 5:19 PM IST

ಗಂಗಾವತಿ: ಸೋಮವಾರ ಮಧ್ಯರಾತ್ರಿ ಸುರಿದ ಜೋರು ಮಳೆಯಿಂದಾಗಿ ಗಂಗಾವತಿ, ಕಾರಟಗಿ ತಾಲೂಕಿನಲ್ಲಿ ಸಾವಿರಾರು ಹೆಕ್ಟೇರ್​ ಪ್ರದೇಶದಲ್ಲಿ ಭತ್ತ ನಾಶದ ಆತಂಕ ಎದುರಾಗಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಈಗಾಗಲೇ ಭತ್ತದ ನಾಟಿ ಆರಂಭವಾಗಿ ತಿಂಗಳು ಕಳೆದಿದೆ. ಆದರೆ, ಮಂಗಳವಾರ ನಸುಕಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಭತ್ತದ ಗದ್ದೆಗೆ ಮಳೆ ನೀರು ನುಗ್ಗಿದೆ. ಕಾರಟಗಿ ತಾಲೂಕಿನ ಹಾಲಸಮುದ್ರ-ಬೂದಗುಂಪಾ ಮತ್ತು ತಿಮ್ಮಾಪೂರ ಗ್ರಾಮಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಎಕರೆ ಭತ್ತ ಜಲಾವೃತವಾಗಿದೆ. ಭತ್ತ ಸಂಗ್ರಹಿಸುವ ಉದ್ದೇಶಕ್ಕೆ ನಿರ್ಮಾಣ ಮಾಡಲಾಗಿದ್ದ ಗೋದಾಮುಗಳು ಮಳೆ ನೀರಿನಲ್ಲಿ ಮುಳುಗಿವೆ.

ABOUT THE AUTHOR

...view details