ಬರದ ನಾಡಿನಲ್ಲಿ ಭರ್ಜರಿ ಮಳೆ.. ಬೋರ್‌ವೆಲ್‌ಗಳಲ್ಲಿ ಉಕ್ಕುತಿದೆ ಜೀವಜಲ.. - ಗೋಪನಹಳ್ಳಿಯ ಗರಣಿಹಳ್ಳ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಾದಂತ್ಯ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಕೆರೆ ಕಟ್ಟೆಗಳಿಗೆ ಜೀವ ಕಳೆ ಬಂದಂತಾಗಿದೆ. ಬಿರುಸಿನ ಮಳೆಗೆ ಹಳ್ಳಕೊಳ್ಳಗಳು ಕೋಡಿ ಒಡೆದಿದ್ದು, ಬೋರ್‌ವೆಲ್‌ಗಳಲ್ಲಿ ಜೀವಜಲ ಉಕ್ಕುತ್ತಿದೆ. ಅಷ್ಟೇ ಅಲ್ಲ, ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದ ಕೆರೆ ಕುಂಟೆ ಕೋಡಿ ಬಿದ್ದಿದ್ದು, ಸೋಮಗುದ್ದು ಗ್ರಾಪಂ ವ್ಯಾಪ್ತಿ ಚಿಕ್ಕಮದುರೆ ಕೆರೆ ತುಂಬಿದ್ದು, ಕೋಡಿ ಬೀಳುವ ಸಾಧ್ಯತೆ ಇದೆ. ಅದೇ ತಾಲೂಕಿನ ಗೋಪನಹಳ್ಳಿ ಸಮೀಪದ ಗರಣಿಹಳ್ಳ ಮಳೆಯಿಂದ ಉಕ್ಕಿ ಹರಿಯುತ್ತಿದ್ದು, ಮಧುರೆ ಕೆರೆ ಕೋಡಿ ಬಿದ್ದಿದ್ದರಿಂದ ಕೊಳವೆ ಬಾವಿಗಳಲ್ಲಿ ನೀರು ಉಕ್ಕಿಹರಿಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮನೆಮಾಡಿದೆ.