ಕರ್ನಾಟಕ

karnataka

ETV Bharat / videos

ಧಾರಾಕಾರ ಮಳೆಗೆ ತತ್ತರಿಸಿದ ಹೈದರಾಬಾದ್​: ವಿಡಿಯೋ ನೋಡಿ - ಮಳೆಯಿಂದ ಹೈದ್ರಾಬಾದ್​ನಲ್ಲಿ ಜನ ಜೀವನ ಅಸ್ತವ್ಯಸ್ತ

By

Published : May 4, 2022, 12:28 PM IST

ಹೈದ್ರಾಬಾದ್​ (ತೆಲಂಗಾಣ): ನೆರೆ ರಾಜ್ಯ ತೆಲಂಗಾಣದಾದ್ಯಂತ ಬುಧವಾರ ಬೆಳಗಿನ ಜಾವ ಏಕಾಏಕಿ ಧಾರಾಕಾರ ಮಳೆ ಸುರಿಯಿತು. ಇದರಿಂದ ರಾಜಧಾನಿ ಹೈದರಾಬಾದ್ ಸೇರಿದಂತೆ​ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಜನರು ತೊಂದರೆ ಅನುಭವಿಸಿದರು. ಕೆಲವೆಡೆಗಳಲ್ಲಿ ಜಲಾವೃತ್ತಗೊಂಡಿದ್ದ ಮನೆಗಳಿಂದ ಜನರನ್ನು ಬೋಟ್​ಗಳ ಮೂಲಕ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಮಂಗಳವಾರ ಸಂಜೆಯಿಂದ ಬೀಸಿದ ಗಾಳಿಗೆ ಮರಗಳು ಧರೆಗುರುಳಿದಿದ್ದು, ಹಲವೆಡೆಗಳಲ್ಲಿ ಬೆಳೆಗಳು ಸಹ ಹಾನಿಗೀಡಾಗಿವೆ. ಕೆಂಡದಂತಹ ಬಿಸಿಲಿಂದ ಬೆಂದ ಭೂಮಿಗೆ ವರುಣ ತಂಪೆರೆದಂತೆಯೂ ಆಗಿದೆ.

ABOUT THE AUTHOR

...view details