ಬೆಣ್ಣೆನಗರಿ ದಾವಣಗೆರೆಗೆ ಜಲ ದಿಗ್ಬಂಧನ: ವಿಡಿಯೋ ನೋಡಿ - Heavy rain effects
ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು, ಚರಂಡಿಗಳು ಕೆರೆಗಳಾಗಿ ಮಾರ್ಪಾಡಾಗಿವೆ. ಬಹುತೇಕ ಬಡಾವಣೆಗಳು ನೀರಿನಿಂದ ಆವೃತವಾಗಿದ್ದು, ಜನರ ಆತಂಕಕ್ಕೆ ಕಾರಣ ಆಗಿದೆ. ಮೂರು ದಿನಗಳಿಂದಲೂ ನಿರಂತರ ಮಳೆ ಆಗುತ್ತಿರುವುದರಿಂದ ಮನೆಗಳು ಹಾನಿ ಆಗುವ ಹಂತಕ್ಕೆ ತಲುಪಿದೆ. ಕೊಯ್ಲಿಗೆ ಬಂದಿರುವ ಭತ್ತದ ಕಟಾವಿಗೆ ತೊಂದರೆಯಾಗಿ ಪೈರು ನೀರು ಪಾಲಾಗಿದೆ. ಜೊತೆಗೆ ಅಡಿಕೆ ಕೂಡ ನೆಲಕಚ್ಚಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.