ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣಕ್ಕೆ ಮುಖ್ಯರಸ್ತೆ ಅಗೆದ ಗ್ರಾಮಸ್ಥರು: ವಿಡಿಯೋ - Villagers dug the road in Chikkamagaluru
ಚಿಕ್ಕಮಗಳೂರು: ಕಡೂರು ತಾಲೂಕಿನ ನಿಡುವಳ್ಳಿ ಗ್ರಾಮ ಸೇರಿ ಇತರೆಡೆಗಳಲ್ಲಿ ಸುರಿದ ಭಾರಿ ಮಳೆ ಸಾಕಷ್ಟು ಅವಾಂತರ ಉಂಟು ಮಾಡಿದೆ. ಇಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ದವಸ ಧಾನ್ಯಗಳಿಗೆ ಹಾನಿಯಾಗಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಎಲ್ಲೆಂದರಲ್ಲಿ ನೀರು ನುಗುತ್ತಿದ್ದು, ನೀರು ಹೊರ ಹಾಕಲು ಮುಖ್ಯರಸ್ತೆಯನ್ನೇ ಗ್ರಾಮಸ್ಥರು ಅಗೆದ ಘಟನೆಯೂ ನಡೆದಿದೆ.