ಗುಂಡಿಗಳಿಂದ ಕೂಡಿರುವ ರಸ್ತೆ: ವಿಭಿನ್ನವಾಗಿ ಪ್ರತಿಭಟಿಸಿದ ಹಾವೇರಿ ಯುವಕರು - ಹಾವೇರಿಯಲ್ಲಿ ಪ್ರತಿಭಟನೆ
ಹಾವೇರಿ: ನಗರದಲ್ಲಿ ಹಾದು ಹೋಗಿರುವ ಪೂನಾ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿರುವ ಸರ್ವೀಸ್ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಗುಂಡಿಗಳಿಂದ ಕೂಡಿರುವ ರಸ್ತೆಯನ್ನು ಅಭಿವೃದ್ಧಿ ಮಾಡೋ ಬದಲು, ಸಿಎಂ ಧಮ್ಮು.. ತಾಕತ್ತಿನ ಬಗ್ಗೆ ಮಾತನಾಡ್ತಿದ್ದಾರೆ ಎಂದು ಯುವಕರು ಆಕ್ರೋಶ ವ್ಯಕ್ತಪಡಿಸಿದರು. ಹದಗೆಟ್ಟು ಹೋದ ರಸ್ತೆಯಲ್ಲಿ ದೀಪಗಳನ್ನು ಹಚ್ಚಿ ಡಿಫರೆಂಟ್ ಆಗಿ ಯುವಕರು ಹಾವೇರಿಯಲ್ಲಿ ಪ್ರತಿಭಟನೆ ಮಾಡಿದರು. ನಗರದ ಸೇಂಟ್ ಯಾನ್ಸ್ ಶಾಲೆಯ ಪಕ್ಕದಲ್ಲಿರೋ ಸರ್ವೀಸ್ ರಸ್ತೆಯಲ್ಲಿ ನಿಂತಿರೋ ನೀರಿನ ಸುತ್ತಲೂ ದೀಪಗಳನ್ನು ಹಚ್ಚಿ ಎನ್ಎಚ್48ರ ಸರ್ವೀಸ್ ರಸ್ತೆಯಲ್ಲಿರೋ ಸಾವಿರಾರು ಕೆರೆಗಳ ರಕ್ಷಣಾ ಅಭಿಯಾನ ಅಂತಾ ವ್ಯಂಗ್ಯವಾಗಿ ದೀಪೋತ್ಸವ ಆಚರಿಸಿದ್ರು.