24 ಗಂಟೆಯಲ್ಲಿ 23 ನವಜಾತ ಶಿಶುಗಳ ಜನನ: ದಾಖಲೆ ಬರೆದ ಸೂರತ್ ಆಸ್ಪತ್ರೆ - 24 ಗಂಟೆಯಲ್ಲಿ 23 ನವಜಾತ ಶಿಶುಗಳ ಜನನ
ಸೂರತ್(ಗುಜರಾತ್): ಸೂರತ್ನ ಆಸ್ಪತ್ರೆವೊಂದರಲ್ಲಿ 24 ಗಂಟೆಯಲ್ಲಿ ದಾಖಲೆಯ 23 ಶಿಶುಗಳು ಜನಿಸಿದ್ದು, ವಿಶೇಷ ದಾಖಲೆ ನಿರ್ಮಾಣಗೊಂಡಿದೆ. ಹುಟ್ಟಿರುವ ಮಕ್ಕಳಲ್ಲಿ 12 ಹೆಣ್ಣು ಮತ್ತು 11 ಗಂಡು ಮಕ್ಕಳಾಗಿದ್ದು, ಆರೋಗ್ಯವಾಗಿವೆ. ಆಸ್ಪತ್ರೆಯ ಅಧ್ಯಕ್ಷೆ ಸಿ.ಪಿ.ವನಾನಿ ಮಾತನಾಡಿ,"ಆಸ್ಪತ್ರೆಯಲ್ಲಿ ತಾಯಿಯೊಬ್ಬಳು ಒಂದಕ್ಕಿಂತ ಹೆಚ್ಚು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರೆ ಪ್ರತಿ ಮಗುವಿಗೆ ಆಸ್ಪತ್ರೆಯಿಂದ ಒಂದು ಲಕ್ಷ ರೂಪಾಯಿ ಮೌಲ್ಯದ ಬಾಂಡ್ ನೀಡಲಾಗ್ತಿದೆ. ಇಲ್ಲಿಯವರೆಗೆ 2000 ಹೆಣ್ಣು ಮಕ್ಕಳಿಗೆ ಒಟ್ಟು 20 ಕೋಟಿ ರೂ ಮೌಲ್ಯದ ಬಾಂಡ್ ವಿತರಿಸಲಾಗಿದೆ" ಎಂದು ತಿಳಿಸಿದರು. ವಿಶೇಷವೆಂದರೆ, ಎಂಟು ವರ್ಷಗಳ ಇತಿಹಾಸದಲ್ಲಿ ಸೂರತ್ನ ಡೈಮಂಡ್ ಆಸ್ಪತ್ರೆ ಒಂದೇ ದಿನ 23 ಹೆರಿಗೆ ಮಾಡಿಸಿದೆ.