ಜೆಡಿಎಸ್ ಅಧಿಕಾರಕ್ಕೆ ತಂದು ಕೊನೆಯ ಉಸಿರು ಬಿಡುವುದು ನನ್ನ ಹಠ : ಮಾಜಿ ಪ್ರಧಾನಿ ಹೆಚ್‌ಡಿಡಿ - ಚಿಕ್ಕಮಗಳೂರುನಲ್ಲಿ ದೇವೇಗೌಡರ ಮಾತು .
ಚಿಕ್ಕಮಗಳೂರು : ಜೆಡಿಎಸ್ ಅಧಿಕಾರಕ್ಕೆ ತಂದು ಕೊನೆಯ ಉಸಿರು ಬಿಡಬೇಕೆಂಬುದೇ ನನ್ನ ಹಠ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ. ದೇವೇಗೌಡರಿಗೆ 90 ಆಗಿದೆ ಅಂತಾ ಯಾರೋ ಹೇಳಿದ್ರು. ನನಗೆ ಇನ್ನು 90 ಮುಟ್ಟೇ ಇಲ್ಲ. ನನ್ನ ಜೀವನದ ಕೊನೆಯ ಆಸೆ ಏನು ಗೊತ್ತಾ?. ಒಂದು ಪ್ರಾದೇಶಿಕ ಪಕ್ಷವನ್ನು ಉಳಿಸಿ, ಅಧಿಕಾರಕ್ಕೆ ತರಬೇಕು. ಅಧಿಕಾರಕ್ಕೆ ತಂದು ಕೊನೆಯ ಉಸಿರು ಬಿಡಬೇಕೆಂಬುದೇ ನನ್ನ ಹಠ. ನಾನು ಸೂಕ್ಷ್ಮವಾಗಿ ಎಲ್ಲವನ್ನೂ ನೋಡುತ್ತಿದ್ದೇನೆ. ಒಬ್ಬ ರಾಜಕೀಯ ಮುಖಂಡನಾಗಿ ಎಲ್ಲಿ ತಪ್ಪುತ್ತಿದ್ದೇವೆ. ಪಕ್ಷ ಉಳಿಸಲು ನಾವು ಹೇಗೆ ನಡೆದುಕೊಳ್ಳಬೇಕು?. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ನನ್ನ ಮನದಲ್ಲಿ ತುಂಬಾ ಆತಂಕ ಇದೆ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದರು.