ಶಿವಮೊಗ್ಗ: ಯುವ ದಸರಾದಲ್ಲಿ ಜನಮನ ರಂಜಿಸಿದ ಗುರುಕಿರಣ್ ಮ್ಯೂಸಿಕಲ್ ನೈಟ್ - ಈಟಿವಿ ಭಾರತ್ ಕನ್ನಡ ಸುದ್ದಿ
ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ದಸರಾ ನಿಮಿತ್ತ ನಡೆದ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಜನ ಮನ ಸೆಳೆಯಿತು. ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ವಿವಿಧ ಜನಪ್ರಿಯ ಹಾಡುಗಳನ್ನು ಅನೇಕರು ಹಾಡಿದರು. ಗುರುಕಿರಣ್, ಅನುರಾಧ ಭಟ್ ಸೇರಿದಂತೆ ಸ್ಥಳೀಯ ಗಾಯಕರ ಸ್ವರ ಮಾಧುರ್ಯಕ್ಕೆ ಶಿವಮೊಗ್ಗ ಜನತೆ ಪುಲ್ ಫಿದಾ ಆದರು. ಮಳೆಯಲ್ಲಿ ಜನ ಮೈ ಚಳಿ ಬಿಟ್ಟು ಕುಣಿದು ಕುಪ್ಪಳಿಸಿದರು.