ಕರ್ನಾಟಕ

karnataka

ETV Bharat / videos

ಚೊಚ್ಚಲ ಪ್ರಯತ್ನದಲ್ಲೇ ಪ್ರಶಸ್ತಿ ಗೆದ್ದ ಗುಜರಾತ್​​.. ಗಾಂಧಿನಗರದಲ್ಲಿ ಅದ್ಧೂರಿ ವಿಜಯೋತ್ಸವ! - ಗುಜರಾತ್​ ಟೈಟನ್ಸ್​​ ವಿಜಯೋತ್ಸವ

By

Published : May 30, 2022, 7:32 PM IST

ಗಾಂಧಿನಗರ : 15ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಚಾಂಪಿಯನ್​ ಆಗಿ ಗುಜರಾತ್ ಟೈಟನ್ಸ್ ಹೊರಹೊಮ್ಮಿದೆ. ಅಹಮದಾಬಾದ್​​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ 7 ವಿಕೆಟ್​ಗಳ ಗೆಲುವು ದಾಖಲಿಸಿತು. ಪ್ರಶಸ್ತಿ ಗೆದ್ದ ಹುಮ್ಮಸ್ಸಿನಲ್ಲಿರುವ ಹಾರ್ದಿಕ್ ಪಾಂಡ್ಯ ಪಡೆ ಇಂದು ಗಾಂಧಿನಗರದಲ್ಲಿ ಅದ್ಧೂರಿ ವಿಜಯೋತ್ಸವದಲ್ಲಿ ಭಾಗಿಯಾಯಿತು. ತೆರೆದ ವಾಹನದಲ್ಲಿ ಪ್ರಶಸ್ತಿ ಜೊತೆಗೆ ಮೆರವಣಿಗೆ ನಡೆಸಿತು. ಇದಕ್ಕೂ ಮುಂಚಿತವಾಗಿ ನಡೆದ ಕಾರ್ಯಕ್ರಮದಲ್ಲಿ ಗುಜರಾತ್​ ಸಿಎಂ ಭೂಪೇಂದ್ರ ಪಟೇಲ್​​ ಗುಜರಾತ್​ ಟೈಟನ್ಸ್ ತಂಡವನ್ನ ಅಭಿನಂದಿಸಿದರು. ಜೊತೆಗೆ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಸ್ಮರಣಿಕೆ ನೀಡಿದರು.

ABOUT THE AUTHOR

...view details