Viral Video: ಟೋಲ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ದಿ ಗ್ರೇಟ್ ಖಲಿ!? - ಟೋಲ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ದಿ ಗ್ರೇಟ್ ಖಲಿ
ಲೂಧಿಯಾನ್(ಪಂಜಾಬ್): ದಿ ಗ್ರೇಟ್ ಖಲಿ ಎಂದು ಜನಪ್ರಿಯರಾಗಿರುವ ದಿಲೀಪ್ ರಾಣಾ ಇಂದು ಟೋಲ್ ಗೇಟ್ ಬಳಿ ತಾಳ್ಮೆ ಕಳೆದುಕೊಂಡಿರುವ ಘಟನೆ ನಡೆದಿದೆ. ಕಾರಿನಲ್ಲಿ ಪ್ರಯಾಣ ಮಾಡ್ತಿದ್ದ ವೇಳೆ ಅಲ್ಲಿನ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದು, ವ್ಯಕ್ತಿಯೋರ್ವನಿಗೆ ಕಪಾಳಮೋಕ್ಷ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಆದರೆ, ಇದನ್ನ ಖಲಿ ನಿರಾಕರಣೆ ಮಾಡಿದ್ದು, ನನ್ನನ್ನು ಬ್ಲಾಕ್ಮೇಲ್ ಮಾಡಲಾಗುತ್ತಿದೆ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ಲೂಧಿಯಾನಾದ ಲಾಡೋವಾಲ್ ಟೋಲ್ ಪ್ಲಾಜಾ ಬಳಿ ಈ ಘಟನೆ ನಡೆದಿದ್ದು, ಟೋಲ್ ಸಿಬ್ಬಂದಿ ದಿ ಗ್ರೇಟ್ ಖಲಿ ಬಳಿ ಐಡಿ ಕಾರ್ಡ್ ಕೇಳಿದ್ದಾರೆ ಎನ್ನಲಾಗ್ತಿದೆ. ಈ ವೇಳೆ, ಕುಪಿತಗೊಂಡ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದಿ ಗ್ರೇಟ್ ಖಲಿ ಜಲಂಧರ್ನಿಂದ ಕರ್ನಾಲ್ಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮತ್ತೊಂದು ವರದಿ ಪ್ರಕಾರ ಟೋಲ್ ಸಿಬ್ಬಂದಿ ಖಲಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು, ಈ ವೇಳೆ ಆಕ್ರೋಶಗೊಂಡ ಕಪಾಳಮೊಕ್ಷ ಮಾಡಿದ್ದಾರೆ ಎನ್ನಲಾಗ್ತಿದೆ. ಘಟನೆ ವೇಳೆ ಮಧ್ಯಪ್ರವೇಶ ಮಾಡಿರುವ ಪೊಲೀಸರು ಪ್ರಕರಣ ತಿಳಿಗೊಳಿಸಿದ್ದಾರೆ.