ಗ್ರಾಮ ಪಂಚಾಯತ್ನಲ್ಲಿರುವ ಜ್ಞಾನದ ಆಗರ ಈ ಮ್ಯೂಸಿಯಂ.. - ಗ್ರಾಮ ಪಂಚಾಯತ್ ಲೈಬ್ರರಿ ಸುದ್ದಿ
ಯಾದಗಿರಿ: ಅದು ಗ್ರಾಮ ಪಂಚಾಯತ್ ಕಚೇರಿ. ಅಲ್ಲಿ ರಾಜಕೀಯ ಮೇಲಾಟ, ಸಭೆಗಳಿಗಿಂತ ವಿದ್ಯಾರ್ಥಿಗಳು, ಸಂಶೋಧಕರೇ ಹೆಚ್ಚಾಗಿ ಕಂಡು ಬರುತ್ತಾರೆ. ಯಾಕಂದ್ರೆ, ಅಲ್ಲೊಂದು ಮ್ಯೂಸಿಯಂ ನಿರ್ಮಿಸಲಾಗಿದೆ. ಅಲ್ಲಿ ಪ್ರಾಗೈತಿಹಾಸಿಕ ಕಾಲದ ಹಲವು ಕುರುಹುಗಳಿವೆ. ಅದು ವಸ್ತು ಸಂಗ್ರಹಾಲಯ ಹೊಂದಿದ ಗ್ರಾಮ ಪಂಚಾಯತ್ ಎಂಬ ಹೆಗ್ಗೆಳಿಕೆಯನ್ನೂ ಹೊಂದಿದೆ. ಹಾಗಾಗಿ ಯಾದಗಿರಿ ಜಿಲ್ಲೆಯ ಆ ಗ್ರಾಮ ಪಂಚಾಯತ್ ಕಚೇರಿ ವಿಶೇಷವಾಗಿದೆ.