ಕಾಮನ್ವೆಲ್ತ್ ಚಿನ್ನದ ಹುಡುಗ ಲಕ್ಷ್ಯ ಸೇನ್ಗೆ ಭವ್ಯ ಸ್ವಾಗತ: ವಿಡಿಯೋ - ಈಟಿವಿ ಭಾರತ ಕನ್ನಡ ನ್ಯೂಸ್
ಕಾಮನ್ವೆಲ್ತ್ ಕ್ರೀಡಾಕೂಟದ ಕೊನೆಯ ಚಿನ್ನದ ಹುಡುಗ, ಭಾರತದ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಬರ್ಮಿಂಗ್ಹ್ಯಾಮ್ನಿಂದ ತಾಯ್ನಾಡಿಗೆ ಬಂದಿಳಿದರು. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ರಾಕೆಟ್ ವೀರನ ಸ್ವಾಗತಿಸಲು ಅಭಿಮಾನಿಗಳ ದಂಡು ಕಾದಿತ್ತು. ವಾದ್ಯಗಳನ್ನು ನುಡಿಸುವ ಮೂಲಕ ಭವ್ಯ ಸ್ವಾಗತ ನೀಡಲಾಯಿತು. ಅಭಿಮಾನಿಗಳೊಂದಿಗೆ ಲಕ್ಷ್ಯ ಸೇನ್ ಹೆಜ್ಜೆ ಹಾಕಿದರು. ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಮಲೇಷ್ಯಾ ಆಟಗಾರ ಎಂಜಿ ತ್ಸೆ ಯಂಗ್ ವಿರುದ್ಧ ಲಕ್ಷ್ಯಸೇನ್ ಗೆದ್ದು ಚೊಚ್ಚಲ ಕಾಮನ್ವೆಲ್ತ್ ಗೇಮ್ಸ್ ಚಿನ್ನ ಜಯಿಸಿದ್ದಾರೆ.
Last Updated : Aug 10, 2022, 1:35 PM IST