ಗೋಕಾಕ್-ಶಿಂಗಳಾಪೂರ ಸೇತುವೆ ಮುಳುಗಡೆ; ಬ್ರಿಡ್ಜ್ ಮೇಲೆಯೇ ವಾಹನಗಳ ವಾಶಿಂಗ್, ಸಂಚಾರ! - ಮಳೆಯಿಂದಾಗಿ ಗೋಕಾಕ ಶಿಂಗಳಾಪೂರ ಸೇತುವೆ ಮುಳುಗಡೆ
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶಿಂಗಳಾಪೂರ ಗ್ರಾಮದ ‘ಗೋಕಾಕ್-ಶಿಂಗಳಾಪೂರ’ ಸೇತುವೆ ನಿರಂತರ ಮಳೆಗೆ ಘಟಪ್ರಭಾ ನದಿ ನೀರಿನ ಒಳಹರಿವು ಹೆಚ್ಚಾಗಿ ಮುಳುಗಡೆ ಆಗಿದೆ. ಆದ್ರೆ ಮುಳುಗಡೆ ಆಗಿರುವ ಗೋಕಾಕ್-ಶಿಂಗಳಾಪುರ ಸೇತುವೆ ಮೇಲೆಯೇ ಬೈಕ್ ಸವಾರರು ಪ್ರಾಣಭಯವಿಲ್ಲದೇ ಸಂಚಾರ ನಡೆಸುತ್ತಿದ್ದಾರೆ. ಬೈಕ್ ಸ್ಕಿಡ್ ಆಗಿ ಅಥವಾ ವಾಹನ ಸವಾರ ನಿಯಂತ್ರಣ ತಪ್ಪಿ ಬಿದ್ರೆ ನದಿ ಪಾಲಾಗುವ ಆತಂಕವಿದೆ. ಮತ್ತೊಂದೆಡೆ ಮುಳುಗಡೆಯಾದ ಸೇತುವೆ ಮೇಲೆಯೇ ಜನರು ತಮ್ಮ ವಾಹನಗಳನ್ನು ಪಾರ್ಕ್ ಮಾಡಿ ತೊಳೆಯುತ್ತಿದ್ದಾರೆ. ಅನಾಹುತ ಸಂಭವಿಸುವ ಮುನ್ನ ಬೆಳಗಾವಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.