ಜಾತ್ರೆಯ ನಡುವೆ ಬಾಯ್‌ಫ್ರೆಂಡ್‌ಗಾಗಿ ಹುಡುಗಿಯರ ಹೊಡೆದಾಟ: ವಿಡಿಯೋ - ಜಾರ್ಖಂಡ್ನ ಪಲಾಮು
ಪಲಾಮು(ಜಾರ್ಖಂಡ್): ಬಾಯ್ ಫ್ರೆಂಡ್ ವಿಚಾರವಾಗಿ ಜಾತ್ರೆಗೆ ಬಂದಿದ್ದ ಇಬ್ಬರು ಹುಡುಗಿಯರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಜಾರ್ಖಂಡ್ನ ಪಲಾಮು ಜಿಲ್ಲೆಯಲ್ಲಿ ನಡೆದಿದೆ. ಈ ನಾಟಕೀಯ ವಿದ್ಯಮಾನಕ್ಕೆ ಹುಡುಗಿಯರ ಗೆಳತಿಯರೂ ಕೈಜೋಡಿಸಿದ್ದು, ಎರಡೂ ಕಡೆಯವರ ನಡುವೆ ಜಟಾಪಟಿ ನಡೆಯಿತು. ಒಬ್ಬ ಹುಡುಗಿ ತನ್ನ ಗೆಳೆಯನೊಂದಿಗೆ ಇನ್ನೊಬ್ಬ ಹುಡುಗಿಯನ್ನು ನೋಡಿದ ಬಳಿಕ ಇಬ್ಬರೂ ಹುಡುಗಿಯರು ಪರಸ್ಪರ ವಾಗ್ವಾದ ನಡೆಸಿದ್ದಾರೆ. ಆಗ ಗೆಳೆಯ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಪೊಲೀಸರು ಸ್ಥಳಕ್ಕೆ ಬಂದು ಹುಡುಗಿಯರ ಮನವೊಲಿಸಿ ಮನೆಗೆ ಕಳುಹಿಸಿದ್ದಾರೆ.