ಕರ್ನಾಟಕ

karnataka

ETV Bharat / videos

ಆಧಾರ್ ಕಾರ್ಡ್​​ ಪರಿಶೀಲಿಸಿದಾಗ ಬಯಲಿಗೆ ಬಿತ್ತು ಪ್ರಿಯಕರನ ಬಣ್ಣ: ರಸ್ತೆಯಲ್ಲೇ ಹಿಡಿದು ಥಳಿಸಿದ ಯುವತಿ - ಯುವತಿಯಿಂದ ಪ್ರಿಯಕರ ಮೇಲೆ ಹಲ್ಲೆ

By

Published : Jul 19, 2022, 9:10 PM IST

ಧನಬಾದ್ (ಜಾರ್ಖಂಡ್​): ಪ್ರೀತಿಯ ಹೆಸರಲ್ಲಿ ಮೋಸ ಮಾಡಲು ಯತ್ನಿಸಿದ ಆರೋಪಿ ಯುವಕನಿಗೆ ಯುವತಿಯೊಬ್ಬಳು ನಡುರಸ್ತೆಯಲ್ಲೇ ಥಳಿಸಿರುವ ಘಟನೆ ಜಾರ್ಖಂಡ್​ನ ಧನಬಾದ್ ಜಿಲ್ಲೆಯಲ್ಲಿ ನಡೆದಿದೆ. ಅಮಾಯಕ ಹುಡುಗಿಯರನ್ನು ಆರೋಪಿ ಪ್ರೀತಿಯ ಬಲೆಗೆ ಬೀಳಿಸುತ್ತಿದ್ದ. ಅಷ್ಟೇ ಅಲ್ಲ, ತನ್ನ ನಿಜವಾದ ಜಾತಿ, ಧರ್ಮದ ಹೆಸರು ಹೇಳದೇ ಮೋಸ ಮಾಡುತ್ತಿದ್ದ. ಹೀಗಾಗಿ ಅನುಮಾನಗೊಂಡ ಯುವತಿಯು ಯುವಕನ ಆಧಾರ್ ಕಾರ್ಡ್ ನೋಡಿದಾಗ ಅದರಲ್ಲಿ ಬೇರೆ ಹೆಸರಿತ್ತು ಎಂದು ಹೇಳಲಾಗಿದೆ. ಆದ್ದರಿಂದ ಯುವತಿ ಆರೋಪಿಗೆ ಮನಬಂದಂತೆ ಥಳಿಸಿದ್ದಾಳೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ABOUT THE AUTHOR

...view details