ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಜನಸಾಗರ... ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಅದ್ಭುತ ದೃಶ್ಯ - ಲಕ್ಷಾಂತರ ಭಕ್ತರು ನೆರೆದಿದ್ದ ಮಹಾರಥೋತ್ಸವದ ಅದ್ಭುತ ದೃಶ್ಯ
ಭಾನುವಾರ ಸಂಜೆ ನಡೆದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಜನಸಾಗರವೇ ಹರಿದು ಬಂದಿತ್ತು. ಎಲ್ಲಿ ನೋಡಿದರು ಜನವೋ ಜನ. ಕಾಲಿಡಲು ಜಾಗವಿರದಷ್ಟು ಜನಜಂಗುಳಿ ಅಲ್ಲಿ ನೆರೆದಿತ್ತು. ಕಣ್ಣು ಹಾಯಿಸಿದಲ್ಲೆಲ್ಲಾ ಜನರೇ ಕಾಣುತ್ತಿದ್ದರು. ಲಕ್ಷಾಂತರ ಭಕ್ತರು ನೆರೆದಿದ್ದ ಮಹಾರಥೋತ್ಸವದ ಅದ್ಭುತ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೇಲಿಂದ ನೋಡಿದರೆ ಅಬ್ಬಾ ಎಷ್ಟೊಂದು ಜನಸಾಗರ ಎಂಬ ಉದ್ಘಾರ ಬರದೆ ಇರಲಾರದು. ಡ್ರೋನ್ ಸೆರೆ ಹಿಡಿದಿರುವ ಮಹಾರಥೋತ್ಸವದ ಹಾಗೂ ಜನಸಾಗರದ ಆ ದೃಶ್ಯವನ್ನೊಮ್ಮೆ ನೀವೂ ಕಣ್ತುಂಬಿಕೊಳ್ಳಿ.