ಕರ್ನಾಟಕ

karnataka

ETV Bharat / videos

50 ಅಡಿ ಆಳದ ಬಾವಿಗೆ ಬಿದ್ದಿದ್ದ ಕಾಡುಕೋಣ.. 3 ಗಂಟೆ ಕಾರ್ಯಾಚರಣೆ, ಬದುಕಿತು ಬಡಜೀವ - ಕಾಡುಕೋಣ ರಕ್ಷಣೆ

By

Published : Jul 9, 2022, 7:41 AM IST

ಶಿವಮೊಗ್ಗ: ಸುಮಾರು‌ 50 ಅಡಿ ಆಳದ ಬಾವಿಗೆ ಬಿದ್ದಿದ್ದ ಕಾಡುಕೋಣವನ್ನು ಸಾಗರದ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದೆ. ತಾಲೂಕಿನ‌ ಕಲ್ಮನೆ ಗ್ರಾಮ ಪಂಚಾಯತ್​ ವ್ಯಾಪ್ತಿಯ ಹಳೇ ಇಕ್ಕೇರಿ ಗ್ರಾಮದಲ್ಲಿ ಕಾಡುಕೋಣ ಬಾವಿಗೆ ಬಿದ್ದಿತ್ತು. ಈ ವಿಚಾರ ತಿಳಿದ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸತತ 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾಡುಕೋಣವನ್ನು ಮೇಲಕ್ಕೆತ್ತಿದ್ದಾರೆ. ಬಾವಿಯಿಂದ ಮೇಲಕ್ಕೆ‌ ತರುತ್ತಿದ್ದಂತೆ ಅದು ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಓಡಿ ಹೋಗಿದೆ. ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ..

ABOUT THE AUTHOR

...view details