ಪಾವಗಡ ಬಳಿ ಗ್ಯಾಸ್ ಟ್ಯಾಂಕರ್ ಬಿದ್ದು ಅಡುಗೆ ಅನಿಲ ಸೋರಿಕೆ: ಗ್ರಾಮವನ್ನೇ ತೊರೆದ 200 ಮನೆಗಳ ಜನ್ರು! - ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ದೊಮ್ಮತಮರಿಯಲ್ಲಿ ಅನಿಲ ಸೋರಿಕೆ
ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಉರುಳಿಬಿದ್ದ ಪರಿಣಾಮ, ಅಪಾರ ಪ್ರಮಾಣದ ಅಡುಗೆ ಅನಿಲ ಸೋರಿ ಹೋಗಿದೆ. ಪಾವಗಡ ತಾಲೂಕಿನ ದೊಮ್ಮತಮರಿಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಟ್ಯಾಂಕರ್ನಿಂದ ಹೊರ ಬರುತ್ತಿರೋ ಅಡುಗೆ ಅನಿಲ, ಗ್ರಾಮದ ತುಂಬೆಲ್ಲ ಹರಡಿಕೊಂಡಿದೆ. ಇದರಿಂದಾಗಿ ಗ್ರಾಮದಲ್ಲಿದ್ದ 200 ಮನೆಗಳ ಜನರು ಮನೆ ಬಿಟ್ಟು ದೂರ ಓಡಿ ಹೋಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ, ಅಡುಗೆ ಅನಿಲ ಸೋರಿಕೆ ಆಗುವುದನ್ನು ತಡೆಗಟ್ಟಲು ಹರಸಾಹಸಪಟ್ಟರೂ ಸಾಧ್ಯವಾಗಿಲ್ಲ.
Last Updated : Apr 27, 2020, 6:44 PM IST